Delivery Options
ಒಟ್ಟು ಹದಿನೇಳು ಪರಭಾಷಾ ಕಥೆಗಳ ಸುಂದರ ಕನ್ನಡಾನುವಾದ. ಮುನ್ನುಡಿ ಬರೆದಿರುವ ಕಥೆಗಾರ ಬೊಳುವಾರು ಮಹಮ್ಮದ್ ಕುಂಞಿ, “ಮೂಲ ಲೇಖಕರಿಗೆ ಮತ್ತು ಅವರ ಬರಹಗಳಿಗೆ ಸಂಪೂರ್ಣ ಶರಣಾಗುತ್ತಲೇ ಓದುಗರ ಪ್ರೀತಿಯನ್ನು ಗೆಲ್ಲಬಲ್ಲ ರೋಹಿತ್ ಚಕ್ರತೀರ್ಥರ ಆಕರ್ಷಕ ನಿರೂಪಣೆಯ ರುಚಿಯನ್ನು ಅರಿಯಬೇಕಾದರೆ ಈ ಹದಿನಾಲ್ಕೂ ಕತೆಗಳನ್ನು ಏಕಾಂತದಲ್ಲಿ ಮೌನವಾಗಿ ಓದಬೇಕು” ಎಂದಿದ್ದಾರೆ. ಕೃತಿಗೆ ವಿಮರ್ಶಕ ಅರವಿಂದ ಚೊಕ್ಕಾಡಿಯವರ ಬೆನ್ನುಡಿ ಇದೆ. ಟಾಲ್‌ಸ್ಟಾಯ್, ಓ ಹೆನ್ರಿ, ಮುರಕಮಿ, ಪೀಟರ್ ಬಿಷೆಲ್, ರೋಆಲ್ಡ್ ಡಾಹ್ಲ್, ಆರ್ಥರ್ ಕಾನನ್ ಡಾಯ್ಲ್, ಜ್ಯಾಕ್ ಲಂಡನ್, ಡಗ್ಲಾಸ್ ಆಡಮ್ಸ್ ಮುಂತಾದವರ ಅತ್ಯಂತ ವಿಶಿಷ್ಟ ಕಥೆಗಳು ಇಲ್ಲಿ ಒಟ್ಟುಗೂಡಿವೆ.
No Customer Reviews
Share your thoughts with other customers