Delivery Options
ಭಗವಾನ್ ಬುದ್ಧನ ಧಮ್ಮಪದ
ಹಿಂದೂಗಳಲ್ಲಿ ಭಗವದ್ಗೀತೆಗೆ ಯಾವ ಮಾನ್ಯತೆ ಇದೆಯೋ ಅಂಥ ಗೌರವವನ್ನು ಬೌದ್ಧರ ವಲಯದಲ್ಲಿ ಧಮ್ಮಪದವು ಸಂಪಾದಿಸಿದೆ. ಜೇತವನದಲ್ಲಿ ತಂಗಿದ್ದಾಗ ಬುದ್ಧನು ತನ್ನ ಶಿಷ್ಯರಿಗೆ ಬೋಧಿಸಿದ ಮಾತುಗಳನ್ನು ಆ ನಂತರದಲ್ಲಿ ಆ ಶಿಷ್ಯರು ಲಿಪಿಬದ್ಧಗೊಳಿಸಿದರು. ಆ ಮಾತುಗಳನ್ನು ಗಾಹೆಗಳೆಂದು ಕರೆಯುತ್ತಾರೆ. ಅಂಥ 400ಕ್ಕೂ ಹೆಚ್ಚು ಗಾಹೆಗಳನ್ನು ಒಟ್ಟಾಗಿ ಧಮ್ಮಪದವೆಂದು ಕರೆಯುತ್ತಾರೆ. ಇದರಲ್ಲಿ ಭಗವಾನ್ ಬುದ್ಧನು ಧರ್ಮ, ಜ್ಞಾನ, ಮೋಕ್ಷ, ದುಃಖ, ಶೋಕ, ಬ್ರಾಹ್ಮಣ್ಯ ಮುಂತಾದ ಹಲವು ವಿಷಯಗಳ ಬಗ್ಗೆ ಹೇಳಿರುವ ಚಿಂತನೆಯ ಸಾರವಿದೆ. ಭಿಕ್ಷುಗಳಿಗಾಗಿ ಹೇಳಿದರೂ ಈ ಮಾತುಗಳು ಜಗತ್ತಿನೆಲ್ಲ ಸಾಧಕರಿಗೂ ಅನ್ವಯವಾಗುವಂಥವೇ ಆಗಿವೆ. ಇಂಥ ಗಾಹೆಗಳನ್ನು, ಮೂಲಕ್ಕೆ ಕಿಂಚಿತ್ತೂ ಚ್ಯುತಿ ಬರದಂತೆ, ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸಂಸ್ಕೃತಿ ಚಿಂತಕರಾದ ಡಾ. ಜಿ. ಬಿ. ಹರೀಶರು ಕನ್ನಡಕ್ಕೆ ಅನುವಾದಿಸಿದ್ದಾರೆ. “ಕಾಮಸೂತ್ರ”ದ ಬಳಿಕ ಅಯೋಧ್ಯಾ ಪ್ರಕಾಶನವು ಹೊರತಂದಿರುವ ಅತ್ಯಂತ ಮೌಲಿಕ ಅನುವಾದ ಕೃತಿ ಇದಾಗಿದೆ.
No Customer Reviews
Share your thoughts with other customers