Delivery Options
ನಮ್ಮ ವಿಶಾಲ ಭೂಮಿಯ ಮೇಲೆ ಬಾಳಿಹೋದ (ಮತ್ತು ಉಳಿದ) ಹಲವಾರು ಜನಾಂಗಗಳಲ್ಲಿ “ಯಹೂದಿ”ಯೂ ಒಂದು. ಕಳೆದ ಎರಡು ಸಾವಿರ ವರ್ಷಗಳಲ್ಲಿ ಹುಟ್ಟಿದ ನೆಲದಿಂದ ದೇಶಭೃಷ್ಟರಾಗಿ, ತಮ್ಮದು ಎಂಬ ನೆಲ, ಭಾಷೆಗಳೆಲ್ಲವನ್ನೂ ಕಳೆದುಕೊಂಡು ನಿಜವಾದ ಅರ್ಥದಲ್ಲಿ ಅನಾಥರಾಗಿದ್ದ ಯಹೂದ್ಯರು ಎಂದೆAದೂ ತಮ್ಮ ಜೀವನಪ್ರೀತಿ ಮತ್ತು ಜನಪದವನ್ನು ಬಿಟ್ಟುಕೊಡಲಿಲ್ಲ. ಯಹೂದ್ಯರ ಕುಲವನ್ನೇ ನಿರ್ನಾಮ ಮಾಡುತ್ತೇನೆಂದು ಹೊರಟ ಹಿಟ್ಲರನಿಗೂ ಅವರ ಜನಪದವನ್ನು ಬೇರುಸಹಿತ ಕೀಳಲು ಆಗಲಿಲ್ಲ. ಅಚ್ಚರಿಯೆಂದರೆ, ಸದಾ ದುಃಖದ ಕುಲುಮೆಯಲ್ಲಿ ಬೆಂದ ಯಹೂದಿ ಜನಾಂಗದ ಜನಪದ ಕತೆಗಳಲ್ಲಿ ಬರುವ ಪಾತ್ರಗಳು ಮಾತ್ರ ತಮ್ಮ ಕೇಳುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಇಂತಹ ಜೀವನದೃಷ್ಟಿಯೂ ಇರುವುದು ಸಾಧ್ಯವಿದೆ ಎಂದು ನಮ್ಮ ಒಳಗಣ್ಣನ್ನು ತೆರೆಯುತ್ತವೆ. ವಿಶಿಷ್ಟವಾದ ಯಹೂದಿ ಹಾಸ್ಯಕತೆಗಳಲ್ಲಿ ೧೦೮ ಕತೆಗಳನ್ನು ಆಯ್ದು “ನೂರೆಂಟು ಯಹೂದಿ ಕತೆಗಳು” ಕೃತಿಯಲ್ಲಿ ಕೊಡಲಾಗಿದೆ.
No Customer Reviews
Share your thoughts with other customers